
19th April 2025
ಬೀದರ್: ಏ.18 :- ೧೫ರ ರಾತ್ರಿ ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ ಮಾಡಿರುವ ಅರಣ್ಯ ಸಿಬ್ಬಂದಿ ದಸ್ತಗೀರ ಸೇರಿ ನಾಲ್ಕು ಜನ ಹಲ್ಲೆ ಮಾಡಿದ್ದರು. ಇಂದು ದಸ್ತಗೀರರನ್ನು ಇಲ್ಲಿಯ ಪ್ರಾದೆಶಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಆದರೆ ಇನ್ನುಳಿದ ಮೂವರಾದ ಸಂಗಮೇಶ, ಗಜಾನಂದ ಹಾಗೂ ಶಾಂತಕುಮಾರ ಈ ಮೂವರನ್ನು ಸಹ ಅಮಾನತ್ತು ಮಾಡಬೇಕು. ಇನ್ನು ಮೂವರನ್ನು ಸಹ ಪತ್ತೆ ಹಚ್ಚಿ ಅವರಿಗೂ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಆದೇಶ ನೀಡಿದ್ದಾರೆಂದ ಮಾತ್ರಕ್ಕೆ ರಾತ್ರಿ ಸಸಿ ನೆಡುವುದು ಪ್ರಕೃತಿಗೆ ಒಳ್ಳೆಯದಲ್ಲ. ರಾತ್ರಿ ಆದ ಮೇಲೆ ಮರಗಳನ್ನು ಕಡಿಯಬಾರದು, ಹೂ ಕೀಳಬಾರದೆಂದು ನಮ್ಮ ಹಿರಿಯರು ಹೇಳುತ್ತಾರೆ. ಅಂಥದರಲ್ಲಿ ಇವರು ರಾತ್ರಿ ಸಸಿಗಳನ್ನು ನೆಡಲು ಹೇಳಿ ಯಾರಿಗೆ ಮೆಚ್ಚಿಸಲು ಸಚಿವರು ಹೊರಟಿದ್ದಾರೆ? ಎಂದು ಪ್ರಶ್ನೆ ಮಾಡಿರುವ ಬಂಗ್ಲೆ ಅವರು, ಇದ್ದ ಸಸಿಗೆ ನೀರು ಹಾಕಿದರೆ ಸಾಕೆಂದು ಹೇಳಿದರು.
ಪತ್ರಕರ್ತನಾದವನಿಗೆ ತನ್ನ ವೃತ್ತಿ ಧರ್ಮ ಪಾಲಿಸಲು ಸಂಪೂರ್ಣ ಅಧಿಕಾರವಿದೆ. ನಮ್ಮ ಅಧಿಕಾರ ಹನನ ಮಾಡುವ ಹಕ್ಕು ಯಾರಿಗೂ ಇಲ್ಲ. ಅಂಥದರಲ್ಲಿ ಪತ್ರಕರ್ತ ರವಿ ಸುದ್ದಿ ಮಾಡಲು ಮುಂದಾದರೆ ಮನಬಂದಂತೆ ಅವನ ಮೇಲೆ ಹಲ್ಲೆ ಮಾಡುವುದು, ಜಾತಿ ನಿಂದನೆ ಮಾಡುವ ಮೂಲಕ ಇಡೀ ಅಧಿಕಾರಿ ವರ್ಗದ ಮಾನ ಹರಾಜು ಮಡಿರುವ ತಪ್ಪಿತಸ್ತ ಎಲ್ಲರ ಮೇಲೂ 307 ಹಾಗೂ ಕಿಡ್ನಾö್ಯಪಿಂಗ್ ಕೆಸ್ ದಾಖಲಿಸಬೇಕಿತ್ತು. ಆದರೆ ಪೋಲಿಸ್ ಅಧಿಕಾರಿಗಳು ನಾಮಕೆ ವಾಸ್ತೆ ಕೇಸ್ ದಾಖಲಿಸಿರುವುದಕ್ಕೆ ಯಾರ ಒತ್ತಡವಿದೆ? ಎಂದು ಪ್ರಶ್ನೆ ಮಾಡಿರುವ ಅವರು, ಕೂಡಲೇ ಹಲ್ಲೆ ಎಸಗಿದ ಇನ್ನುಳಿದ ಮೂವರ ಮೇಲು ಅಮಾನತ್ತು ಶಿಕ್ಷೆ ಆಗಬೇಕು ಜೊತೆಗೆ ಇನ್ನು ಮೂವರ ಪತ್ತೆ ಹಚ್ಚಿ ಅವರ ಮೇಲೂ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಕಾನಿಪ ಧ್ವನಿ ಸಂಘಟನೆ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಪಗಡೆ ಮಾತನಾಡಿ, ಹಲ್ಲೆ ಮಾಡುವ ಸಂದರ್ಭದಲ್ಲಿ ಹಲ್ಲೆಗೈದ ಅರಣ್ಯ ಸಿಬ್ಬಂದಿಗಳು ಸಚಿವ ಈಶ್ವರ ಖಂಡ್ರೆಯವರಿಗೆ ಹೋಗಿ ಹೇಳು ಎಂದು ಗದರಿಸುವ ಮೂಲಕ ಖಂಡ್ರೆಯವರನ್ನು ಹಿಯಾಳಿಸಲು ಅವರ ಇಲಾಖೆಯ ಸಿಬ್ಬಂದಿಗಳೆ ಹೋರಟಿದ್ದಾರೆ ಎನ್ನುವಂಗಾಯ್ತು. ಪತ್ರಕರ್ತ ರವಿ ಕುಡಿದಿದ್ದಾನೆ ಎಂದು ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈಗಾಗಲೇ ರವಿ ಕುಡಿದಿಲ್ಲ ಎಂಬ ವೈದ್ಯಕೀಯ ವರದಿ ಬಂದಿದೆ. ಆದರೆ ಅರಣ್ಯ ಸಿಬ್ಬಂದಿಗಳು ಕುಡಿದಿರುವ ಬಗ್ಗೆ ಸಹ ಟೆಸ್ಟ್ ಆಗಬೇಕು, ತಪ್ಪಿತಸ್ತ ಎಲ್ಲರ ಮೇಲೂ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಾನಸನ್ ಘೋಡೆ, ಕಲಬುರಗಿ ಜಿಲ್ಲಾಧ್ಯಕ್ಷ ರಾಜಶೇಖರ ಮಾತೋಳಿ, ಪದಾಧಿಕಾರಿಗಳಾದ ಶ್ರೆöÊಶೈಲ ಪಗಡೆ, ಪ್ರವಿಣ ಮತ್ತು ಶ್ರೀಕಾಂತ ಪತ್ರಿಕಾಗೋಷ್ಟಿಯಲ್ಲಿದ್ದರು.
ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರವರ ೧೩೪ ನೇಯ ಜಯಂತೋತ್ಸವ ಅದ್ದೂರಿ ಸಂಭ್ರಮದ ಮೇರವಣಿಗೆ!!
ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಏ.೨೦ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಭೆ